======================================================================
LibreOffice 4.2 ರೀಡ್‌ಮಿ
======================================================================

ಈ ರೀಡ್‌ಮಿ ಕಡತದ ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ, http://www.libreoffice.org/welcome/readme.html ಅನ್ನು ನೋಡಿ

ಈ ಕಡತವು LibreOffice ತಂತ್ರಾಂಶದ ಬಗೆಗಿನ ಪ್ರಮುಖ ಮಾಹಿತಿಯನ್ನು ಹೊಂದಿದೆ. ನೀವು ಅನುಸ್ಥಾಪನೆಯನ್ನು ಆರಂಭಿಸುವ ಮೊದಲು ಈ ಮಾಹಿತಿ ಅತ್ಯಂತ ಜಾಗರೂಕತೆಯಿಂದ ಓದಿಕೊಳ್ಳಿ ಎಂದು ಸಲಹೆ ಮಾಡಲಾಗುತ್ತದೆ.

LibreOffice ಸಮುದಾಯವು ಈ ಉತ್ಪನ್ನದ ವಿಕಸನೆಯ ಜವಾಬ್ಧಾರಿಯನ್ನು ಹೊತ್ತಿರುತ್ತದೆ, ಹಾಗು ನೀವೂ ಸಹ ಸಮುದಾಯದ ಒಬ್ಬ ಸದಸ್ಯರಾಗಿ ಇದರಲ್ಲಿ ಪಾಲ್ಗೊಳ್ಳಿ ಎಂದು ಆಹ್ವಾನ ಮಾಡಲಾಗುತ್ತದೆ. ನೀವು ಒಬ್ಬ ಹೊಸ ಬಳಕೆದಾರನಾಗಿದ್ದರೆ, ನೀವು LibreOffice ತಾಣಕ್ಕೆ ಭೇಟಿ ನೀಡಬಹುದು, ಇಲ್ಲಿ ನಿಮಗೆ LibreOffice ಪರಿಯೋಜನೆ ಹಾಗು ಅದರ ಸುತ್ತ ಅಸ್ತಿತ್ವದಲ್ಲಿರುವ ಸಮುದಾಯಗಳ ಬಗೆಗಿನ ಹಲವಾರು ಮಾಹಿತಿಗಳು ಕಂಡು ಬರುತ್ತವೆ. http://www.libreoffice.org/ ಗೆ ಭೇಟಿ ನೀಡಿ.

LibreOffice ಅನ್ನು ಎಲ್ಲರೂ ಉಚಿತವಾಗಿ ಬಳಸಬಹುದೆ?
----------------------------------------------------------------------

LibreOffice ಅನ್ನು ಯಾರು ಬೇಕಿದ್ದರೂ ಉಚಿತವಾಗಿ ಬಳಸಬಹುದಾಗಿದೆ. ನೀವು  LibreOffice ನ ಈ ಪ್ರತಿಯನ್ನು ನೀವು ಇಚ್ಛಿಸುವ ಸಂಖ್ಯೆಯ ಗಣಕಯಂತ್ರಗಳಲ್ಲಿ ಅನುಸ್ಥಾಪಿಸಬಹುದಾಗಿರುತ್ತದೆ, ಹಾಗು ನಿಮ್ಮ ಯಾವುದೆ ಉದ್ಧೇಶಗಳಲ್ಲಿ ಬಳಸಬಹುದಾಗಿರುತ್ತದೆ (ವ್ಯಾಪಾರಿ, ಸರ್ಕಾರಿ, ಸಾರ್ವಜನಿಕ ನಿರ್ವಹಣೆ ಹಾಗು ಶೈಕ್ಷಣಿಕವೂ ಸೇರಿದಂತೆ). ಹೆಚ್ಚಿನ ಮಾಹಿತಿಗಾಗಿ ಈ  LibreOffice ಡೌನ್‌ಲೋಡ್‌ನಲ್ಲಿರುವ ಪರವಾನಗಿ ಪಠ್ಯವನ್ನು ನೋಡಿ.

LibreOffice ಏಕೆ ಉಚಿತವಾಗಿದೆ?
----------------------------------------------------------------------

ನೀವು LibreOffice ನ ಈ ಪ್ರತಿಯನ್ನು ಉಚಿತವಾಗಿ ಬಳಸಬಹುದಾಗಿದೆ ಏಕೆಂದರೆ, LibreOffice ಎನ್ನುವುದು ಪ್ರತ್ಯೇಕವಾಗಿ  ನೆರವಾಗುವವರು ಹಾಗು ಕಾರ್ಪೋರೇಟ್ ಪ್ರಾಯೋಜಕರು ವಿನ್ಯಸಿಸಿ, ವಿಕಸಿಸಿ, ಪರೀಕ್ಷಿಸಿ, ಅನುವಾದಿಸಿ, ದಸ್ತಾವೇಜುಗೊಳಿಸಿ, ಬೆಂಬಲಿಸಿ, ಹಾಗು ಇನ್ನೂ ಹಲವಾರು ರೀತಿಯಲ್ಲಿ ನೆರವಾಗುವ ಮೂಲಕ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿರುವ ಮನೆ ಹಾಗು ಕಛೇರಿಯಲ್ಲಿ ಬಳಸಬಹುದಾದ ಮುಕ್ತ ಉತ್ಪಾದನಾ ತಂತ್ರಾಂಶವಾಗಿ ಇಂದು ಲಭ್ಯವಿದೆ.

ನೀವು ಅವರ ಶ್ರಮವನ್ನು ಪ್ರಶಂಸಿಸುವುದಾದರೆ, ಹಾಗು ಮುಂದೆ ಭವಿಷ್ಯದಲ್ಲಿಯೂ ಸಹ LibreOffice ಲಭ್ಯವಿರಬೇಕೆಂದರೆ, ದಯವಿಟ್ಟು ಪರಿಯೋಜನೆಗೆ ನೆರವಾಗುವ ಬಗ್ಗೆ ಪರಿಗಣಿಸಿ - ವಿವರಗಳಿಗಾಗಿ http://www.documentfoundation.org/contribution/ ಅನ್ನು ನೋಡಿ. ಪ್ರತಿಯೊಬ್ಬರೂ ಸಹ ಒಂದಲ್ಲ ಒಂದು ರೀತಿಯಲ್ಲಿ ನೆರವಾಗಬಹುದು.

----------------------------------------------------------------------
ಅನುಸ್ಥಾಪನೆಯ ಸೂಚನೆಗಳು
----------------------------------------------------------------------

LibreOffice ಪರಿಪೂರ್ಣವಾಗಿ ಕೆಲಸ ಮಾಡಲು Java Runtime Environment (JRE) ನ ಇತ್ತೀಚಿನ ಒಂದು ಆವೃತ್ತಿಯ ಅಗತ್ಯವಿರುತ್ತದೆ. JRE ಯು LibreOffice ನ ಅನುಸ್ಥಾಪನೆಯೊಂದಿಗೆ ಬರುವುದಿಲ್ಲ, ನೀವದನ್ನು ಪ್ರತ್ಯೇಕವಾಗಿ ಅನುಸ್ಥಾಪಿಸಬೇಕಾಗುತ್ತದೆ.

ಗಣಕದ ಅಗತ್ಯತೆಗಳು
----------------------------------------------------------------------

ಸಾಮಾನ್ಯ ನಿಯಮದಂತೆ, ನಿಮ್ಮಲ್ಲಿರುವ ನಿಶ್ಚಿತ ಲಿನಕ್ಸ್‍ ವಿತರಣೆಯಿಂದ (ಉಬುಂಟು ಲಿನಕ್ಸಿನಲ್ಲಿನ ಉಬುಂಟು ಸಾಫ್ಟ್‍ವೇರ್ ಸೆಂಟರ್) ಸಲಹೆ ಮಾಡಲಾಗುವ ಅನುಸ್ಥಾಪನಾ ವಿಧಾನದಿಂದ ನೀವು LibreOffice ಅನ್ನು ಅನುಸ್ಥಾಪಿಸುವಂತೆ ಸಲಹೆ ಮಾಡಲಾಗುತ್ತದೆ. ಇದಕ್ಕೆ ಕಾರಣ, ನಿಮ್ಮ ವ್ಯವಸ್ಥೆಗೆ ಸೂಕ್ತವಾಗುವಂತೆ ಹೊಂದಿಸಲಾದ ಅನುಸ್ಥಾಪನೆಯನ್ನು ಪಡೆಯುವುದು ಸರಳವಾದ ವಿಧಾನವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ನೀವು ಲಿನಕ್ಸ್ ಕಾರ್ಯವ್ಯವಸ್ಥೆಯನ್ನು ಅನುಸ್ಥಾಪಿಸಿದಾಗ LibreOffice ಅನ್ನು ಪೂರ್ವನಿಯೋಜಿತವಾಗಿ ಅನುಸ್ಥಾಪಿಸಿರುವ ಸಾಧ್ಯತೆ ಇರುತ್ತದೆ.

ಈ "ಸ್ಟ್ಯಾಂಡ್-ಅಲೋನ್" LibreOffice ಅನುಸ್ಥಾಪಕವನ್ನು ಅವಲೋಕನಗಳ ಅಗತ್ಯವಿರುವ, ವಿಶೇಷ ಅಗತ್ಯತೆಗಳನ್ನು ಹೊಂದಿರುವ, ಹಾಗು ಸಾಮಾನ್ಯವಲ್ಲದ ಸಂದರ್ಭಗಳಿಗಾಗಿ ಒದಗಿಸಲಾಗಿದೆ.

* ಲಿನಕ್ಸ್ ಕರ್ನಲ್ ಆವೃತ್ತಿ 2.6.18 ಅಥವ ಮುಂದಿನ;
* glibc2 ಆವೃತ್ತಿ 2.5 ಅಥವ ಮುಂದಿನ;
* freetype version 2.2.0 or higher;
* gtk ಆವೃತ್ತಿ 2.10.4 ಅಥವ ಮುಂದಿನ;
* Gnome 2.16 or higher, with the gail 1.9 and the at-spi 1.7 packages (required for support for assistive technology [AT] tools), or another compatible GUI (such as KDE, among others).

ಹಲವು ವಿಧದ ಲಿನಕ್ಸ್ ವಿತರಣೆಗಳು ಲಭ್ಯವಿವೆ, ಹಾಗು ಒಂದೆ ರೀತಿಯ ಲಿನಕ್ಸಿನಲ್ಲಿ ವಿವಿಧ ಅನುಸ್ಥಾಪನಾ ಆಯ್ಕೆಗಳು ಲಭ್ಯವಿರಬಹುದು (KDE ಮತ್ತು Gnome, ಇತರೆ.). ಕೆಲವು ವಿತರಕರು ತಮ್ಮದೆ ಆದ "ಸ್ಥಳೀಯ" LibreOffice ನ ಆವೃತ್ತಿಯನ್ನು ಒದಗಿಸುತ್ತಾರೆ, ಇದು ಸಮುದಾಯದಿಂದ ಒದಗಿಸಲಾದ LibreOffice ನ ಆವೃತ್ತಿಗಿಂತ ಭಿನ್ನವಾದ ಸವಲತ್ತುಗಳನ್ನು ಹೊಂದಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ನೀವು ಸಮುದಾಯದಿಂದ ಒದಗಿಸಲಾದ LibreOffice ಅನ್ನು ಸ್ಥಳೀಯ ಆವೃತ್ತಿಯ ಜೊತೆಯಲ್ಲಿಯೆ ಅನುಸ್ಥಾಪಿಸಲು ಸಾಧ್ಯವಿರುತ್ತದೆ. ಆದರೆ, ಸಮುದಾಯದಿಂದ ಒದಗಿಸಲಾದ ಈ ಆವೃತ್ತಿಯನ್ನು ಅನುಸ್ಥಾಪಿಸುವ ಮೊದಲು ನೀವು "ಸ್ಥಳೀಯ" ಆವೃತ್ತಿಯನ್ನು ತೆಗೆಯಬಹುದಾಗಿರುತ್ತದೆ. ಅದನ್ನು ಹೇಗೆ ಮಾಡಬೇಕು ಎನ್ನುವುದರ ಕುರಿತಾದ ವಿವರಗಳಿಗಾಗಿ, ನಿಮಗೆ ಲಿನಕ್ಸ್ ಒದಗಿಸಿದವರು ನೀಡುವ ಬಳಕೆದಾರರ ನೆರವಿನ ಸಂಪನ್ಮೂಲಗಳನ್ನು ನೋಡಿ.

ಅನುಸ್ಥಾಪಿಸಲಾದ ತಂತ್ರಾಂಶವನ್ನು ತೆಗೆದುಹಾಕುವಾಗ ಅಥವ ಹೊಸದಾಗಿ ಅನುಸ್ಥಾಪಿಸುವಾಗ ಯಾವಾಗಲೂ ನಿಮ್ಮ ವ್ಯವಸ್ಥೆಯನ್ನು ಹಾಗು ದತ್ತಾಂಶದ ಒಂದು ಪ್ರತಿಯನ್ನು ಶೇಖರಿಸಿ ಇಟ್ಟುಕೊಳ್ಳುವುದು ಒಳ್ಳೆಯದು.

ನಿಮ್ಮ ವ್ಯವಸ್ಥೆಯಲ್ಲಿರುವ ತಾತ್ಕಾಲಿಕ ಕೋಶದಲ್ಲಿ ಸಾಕಷ್ಟು ಮುಕ್ತ ಮೆಮೊರಿಯು ಲಭ್ಯವಿದೆ ಎಂದು ಖಚಿತಪಡಿಸಿಕೊಳ್ಳಿ, ಹಾಗು ಅದರಿಂದ ಓದುವ, ಅದಕ್ಕೆ ಬರೆಯುವ ಹಾಗು ಚಲಾಯಿಸುವ ಅಧಿಕಾರಗಳನ್ನು ನೀಡಲಾಗಿದೆ ಎಂದು ಖಾತ್ರಿ ಮಾಡಿಕೊಳ್ಳಿ. ಅನುಸ್ಥಾಪನೆಯನ್ನು ಆರಂಭಿಸುವ ಮೊದಲು ಎಲ್ಲಾ ಪ್ರೊಗ್ರಾಮ್‌ಗಳನ್ನು ಮುಚ್ಚಿ. 

ಡಿಬಿಯನ್/ಉಬುಂಟು-ಆಧರಿತವಾದ ಲಿನಕ್ಸ್ ವ್ಯವಸ್ಥೆಯಲ್ಲಿ LibreOffice ನ ಅನುಸ್ಥಾಪನೆ
----------------------------------------------------------------------

For instructions on how to install a language pack (after having installed the US English version of LibreOffice), please read the section below entitled Installing a Language Pack.

ಡೌನ್‌ಲೋಡ್ ಮಾಡಲಾದ ಆರ್ಕೈವ್‌ನಲ್ಲಿರುವುದನ್ನು ನೀವು ಹೊರತೆಗೆದಾಗ, ಅದರಲ್ಲಿರುವುದೆಲ್ಲವನ್ನೂ ಸಹ ಒಂದು ಉಪ-ಕೋಶಕ್ಕೆ ಹೊರತೆಗೆಯಲಾಗಿರುವುದನ್ನು ನೀವು ಕಾಣಬಹುದು. ಒಂದು ಕಡತ ವ್ಯವಸ್ಥಾಪಕ ಕಿಟಕಿಯನ್ನು ತೆರೆಯಿರಿ, ಹಾಗು ಕೋಶವನ್ನು "LibreOffice_" ಎಂದು ಆರಂಭಗೊಳ್ಳುವ ಹಾಗು ನಂತರ ಆವೃತ್ತಿ ಸಂಖ್ಯೆ ಮತ್ತು ಒಂದಿಷ್ಟು ಪ್ಲಾಟ್‌ಫಾರ್ಮ್ ಮಾಹಿತಿ ಇರುವುದಕ್ಕೆ ಬದಲಾಯಿಸಿ.

ಈ ಕೋಶವು "DEBS" ಎಂಬ ಒಂದು ಉಪಕೋಶವನ್ನು ಹೊಂದಿರುತ್ತದೆ. ಕೋಶವನ್ನು "DEBS" ಕೋಶಕ್ಕೆ ಬದಲಾಯಿಸಿ.

ಕೋಶದ ಮೇಲೆ ಮೌಸ್‌ನ ಬಲಗುಂಡಿಯನ್ನು ಒತ್ತಿ ಹಾಗು "ಟರ್ಮಿನಲ್‌ನಲ್ಲಿ ತೆರೆ" ಅನ್ನು ಆಯ್ಕೆ ಮಾಡಿ. ಒಂದು ಟರ್ಮಿನಲ್ ವಿಂಡೊವು ತೆರೆದುಕೊಳ್ಳುತ್ತದೆ. ಟರ್ಮಿನಲ್‌ ವಿಂಡೊದಲ್ಲಿನ ಆಜ್ಞಾ ಸಾಲಿನಲ್ಲಿ, ಈ ಕೆಳಗಿನ ಆಜ್ಞೆಯನ್ನು ನಮೂದಿಸಿ (ಆಜ್ಞೆಯು ಕಾರ್ಯಗತಗೊಳ್ಳುವ ಮೊದಲು ನಿರ್ವಾಹಕ ಬಳಕೆದಾರರ ಗುಪ್ತಪದವನ್ನು ನಮೂದಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ):

ಈ ಕೆಳಗಿನ ಆದೇಶಗಳು LibreOffice ಮತ್ತು ಗಣಕತೆರೆ ಸಂಯೋಜಿಸುವ ಪ್ಯಾಕೇಜುಗಳ ಅನುಸ್ಥಾಪಿಸುತ್ತದೆ. (ಅವುಗಳನ್ನು ನೀವು ಟೈಪ್‌ ಮಾಡುವ ಬದಲು ಅದನ್ನು  ಪ್ರತಿ ಮಾಡಿ ಟರ್ಮಿನಲ್ ತೆರೆಗೆ ಅಂಟಿಸಬಹುದು):

sudo dpkg -i *.deb

ಅನುಸ್ಥಾಪನೆಯ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ, ಹಾಗು ಎಲ್ಲಾ LibreOffice ಅನ್ವಯಗಳ ಚಿಹ್ನೆಗಳು ಈಗ ನಿಮ್ಮ ಗಣಕತೆರೆಯ ಅನ್ವಯಗಳು/ಆಫೀಸ್ ಮೆನುವಿನಲ್ಲಿ ಇರಬೇಕು.

ಫೆಡೋರ, ಓಪನ್‌ಸುಸೆ, ಮ್ಯಾಂಡ್ರೀವ ಹಾಗು RPM ಪ್ಯಾಕೇಜುಗಳನ್ನು ಬಳಸುವ ಇತರೆ ಲಿನಕ್ಸ್‍ ವ್ಯವಸ್ಥೆಗಳಲ್ಲಿ LibreOffice ಅನ್ನು ಅನುಸ್ಥಾಪಿಸುವಿಕೆ
----------------------------------------------------------------------

For instructions on how to install a language pack (after having installed the US English version of LibreOffice), please read the section below entitled Installing a Language Pack.

ಡೌನ್‌ಲೋಡ್ ಮಾಡಲಾದ ಆರ್ಕೈವ್‌ನಲ್ಲಿರುವುದನ್ನು ನೀವು ಹೊರತೆಗೆದಾಗ, ಅದರಲ್ಲಿರುವುದೆಲ್ಲವನ್ನೂ ಸಹ ಒಂದು ಉಪ-ಕೋಶಕ್ಕೆ ಹೊರತೆಗೆಯಲಾಗಿರುವುದನ್ನು ನೀವು ಕಾಣಬಹುದು. ಒಂದು ಕಡತ ವ್ಯವಸ್ಥಾಪಕ ಕಿಟಕಿಯನ್ನು ತೆರೆಯಿರಿ, ಹಾಗು ಕೋಶವನ್ನು "LibreOffice_" ಎಂದು ಆರಂಭಗೊಳ್ಳುವ ಹಾಗು ನಂತರ ಆವೃತ್ತಿ ಸಂಖ್ಯೆ ಮತ್ತು ಒಂದಿಷ್ಟು ಪ್ಲಾಟ್‌ಫಾರ್ಮ್ ಮಾಹಿತಿ ಇರುವುದಕ್ಕೆ ಬದಲಾಯಿಸಿ.

ಈ ಕೋಶವು "RPMS"" ಎಂಬ ಒಂದು ಉಪಕೋಶವನ್ನು ಹೊಂದಿರುತ್ತದೆ. ಕೋಶವನ್ನು "RPMS"" ಕೋಶಕ್ಕೆ ಬದಲಾಯಿಸಿ.

ಕೋಶದ ಮೇಲೆ ಮೌಸ್‌ನ ಬಲಗುಂಡಿಯನ್ನು ಒತ್ತಿ ಹಾಗು "ಟರ್ಮಿನಲ್‌ನಲ್ಲಿ ತೆರೆ" ಅನ್ನು ಆಯ್ಕೆ ಮಾಡಿ. ಒಂದು ಟರ್ಮಿನಲ್ ವಿಂಡೊವು ತೆರೆದುಕೊಳ್ಳುತ್ತದೆ. ಟರ್ಮಿನಲ್‌ ವಿಂಡೊದಲ್ಲಿನ ಆಜ್ಞಾ ಸಾಲಿನಲ್ಲಿ, ಈ ಕೆಳಗಿನ ಆಜ್ಞೆಯನ್ನು ನಮೂದಿಸಿ (ಆಜ್ಞೆಯು ಕಾರ್ಯಗತಗೊಳ್ಳುವ ಮೊದಲು ನಿರ್ವಾಹಕ ಬಳಕೆದಾರರ ಗುಪ್ತಪದವನ್ನು ನಮೂದಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ):

ಫೆಡೋರ-ಆಧರಿತವಾದ ವ್ಯವಸ್ಥೆಗಳಿಗಾಗಿ: su -c 'yum install *.rpm'

ಮ್ಯಾಂಡ್ರೀವಾ-ಆಧರಿತವಾದ ವ್ಯವಸ್ಥೆಗಳಿಗಾಗಿ: sudo urpmi *.rpm

ಇತರೆ RPM-ಆಧರಿತವಾದ ವ್ಯವಸ್ಥೆಗಳಿಗಾಗಿ (ಓಪನ್‌ಸುಸೆ, ಇತರೆ): rpm -Uvh *.rpm

ಅನುಸ್ಥಾಪನೆಯ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ, ಹಾಗು ಎಲ್ಲಾ LibreOffice ಅನ್ವಯಗಳ ಚಿಹ್ನೆಗಳು ಈಗ ನಿಮ್ಮ ಗಣಕತೆರೆಯ ಅನ್ವಯಗಳು/ಆಫೀಸ್ ಮೆನುವಿನಲ್ಲಿ ಇರಬೇಕು.

Alternatively, you can use the 'install' script, located in the toplevel directory of this archive to perform an installation as a user. The script will set up LibreOffice to have its own profile for this installation, separated from your normal LibreOffice profile. Note that this will not install the system integration parts such as desktop menu items and desktop MIME type registrations.

ಲಿನಕ್ಸ್ ವಿತರಣೆಗಳಿಗಾಗಿನ ಗಣಕತೆರೆಯ ಸಂಯೋಜಿಸುವಿಕೆಯ ಕುರಿತಾದ ಟಿಪ್ಪಣಿಗಳನ್ನು ಈ ಮೇಲಿನ ಅನುಸ್ಥಾಪನಾ ಸೂಚನೆಗಳಲ್ಲಿ ಸೇರ್ಪಡಿಸಲಾಗಿಲ್ಲ.
----------------------------------------------------------------------

ಈ ಅನುಸ್ಥಾಪನಾ ಸೂಚನೆಗಳಲ್ಲಿ ನಿಶ್ಚಿತವಾಗಿ ಒಳಗೊಳ್ಳಿಸದೆ ಇರುವ ಇತರೆ ಲಿನಕ್ಸ್ ವಿತರಣೆಗಳಲ್ಲಿ LibreOffice ಅನ್ನು ಅನುಸ್ಥಾಪಿಸುವುದು ಕಷ್ಟಕರವೇನಲ್ಲ. ಗಣಕತೆರೆ ಸಂಯೋಜನೆಯು ಮಾತ್ರ ಕೊಂಚ ಭಿನ್ನವಾಗಿ ಕಾಣಿಸಿಕೊಳ್ಳಬಹುದು.

The RPMS (or DEBS, respectively) directory also contains a package named libreoffice4.1-freedesktop-menus-4.1.0-3.noarch.rpm (or libreoffice4.1-debian-menus_4.1.0-3_all.deb, respectively, or similar). This is a package for all Linux distributions that support the Freedesktop.org specifications/recommendations (http://en.wikipedia.org/wiki/Freedesktop.org), and is provided for installation on other Linux distributions not covered in the aforementioned instructions.

ಭಾಷಾ ಪ್ಯಾಕೇಜನ್ನು ಅನುಸ್ಥಾಪಿಸಲಾಗುತ್ತಿದೆ
----------------------------------------------------------------------

ನೀವು ಬಯಸುವ ಭಾಷೆ ಹಾಗು ಪ್ಲಾಟ್‌ಫಾರ್ಮನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅವುಗಳು ಮುಖ್ಯ ಅನುಸ್ಥಾಪನಾ ಆರ್ಕೈವುಗಳ ಲಭ್ಯವಿರುವ ಸ್ಥಳದಲ್ಲಿಯೆ ದೊರೆಯುತ್ತವೆ.  Nautilus ಕಡತ ವ್ಯವಸ್ಥಾಪಕದಿಂದ, ಡೌನ್‌ಲೋಡ್ ಮಾಡಿಕೊಳ್ಳಲಾದ ಆರ್ಕೈವ್ ಅನ್ನು ಒಂದು ಕೋಶಕ್ಕೆ ಹೊರತೆಗೆಯಿರಿ (ಉದಾಹರಣೆಗೆ ನಿಮ್ಮ ಗಣಕತೆರೆ). ನೀವು ಎಲ್ಲಾ  LibreOffice ಅನ್ವಯಗಳಿಂದಲೂ ಸಹ ನಿರ್ಗಮಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ (QuickStarter ಅನ್ನು ಆರಂಭಿಸಲಾಗಿದ್ದರೆ, ಅದನ್ನೂ ಸಹ).

ನೀವು ಡೌನ್‌ಲೋಡ್ ಮಾಡಲಾದ ಭಾಷಾ ಪ್ಯಾಕ್ ಅನ್ನು ಯಾವ ಕೋಶಕ್ಕೆ ಹೊರತೆಗೆದಿರುತ್ತೀರೊ ಅದಕ್ಕೆ ಕೋಶವನ್ನು ಬದಲಾಯಿಸಿ.

ಈಗ ಕೋಶವನ್ನು ಹೊರತೆಗೆಯುವ ಪ್ರಕ್ರಿಯೆಲ್ಲಿ ರಚಿಸಲಾದ ಕೋಶಕ್ಕೆ ಬದಲಾಯಿಸಿ. ಉದಾಹರಣೆಗೆ, ಒಂದು 32-ಬಿಟ್ ಡಿಬಿಯನ್/ಉಬುಂಟು ಆಧರಿತವಾದ ವ್ಯವಸ್ಥೆಗಾಗಿನ ಫ್ರೆಂಚ್ ಭಾಷಾ ಪ್ಯಾಕ್‌ಗಾಗಿ, ಕೋಶಕ್ಕೆ LibreOffice_, ಜೊತೆಗೆ ಒಂದಿಷ್ಟು ಆವೃತ್ತಿ ಮಾಹಿತಿ, ನಂತರ Linux_x86_langpack-deb_fr ಎಂದು ಹೆಸರಿಸಬೇಕು.

ಈಗ ಕೋಶವನ್ನು ಅನುಸ್ಥಾಪಿಸಬೇಕಿರುವ ಪ್ಯಾಕೇಜನ್ನು ಹೊಂದಿರುವ ಕೋಶಕ್ಕೆ ಬದಲಾಯಿಸಿ. ಡಿಬಿಯನ್/ಉಬುಂಟು ಆಧರಿತವಾದ ವ್ಯವಸ್ಥೆಗಳಲ್ಲಿ, ಕೋಶವು DEBS ಆಗಿರುತ್ತದೆ. ಫೆಡೋರ, ಓಪನ್‌ಸುಸೆ ಅಥವ ಮ್ಯಾಂಡ್ರಿವಾ ವ್ಯವಸ್ಥೆಗಳಲ್ಲಿ, ಕೋಶವು RPMS ಆಗಿರುತ್ತದೆ.

Nautilus ಕಡತ ವ್ಯವಸ್ಥಾಪಕದಿಂದ, ಕೋಶದ ಮೇಲೆ ಮೌಸ್‌ನ ಬಲಗುಂಡಿ-ಕ್ಲಿಕ್ ಮಾಡಿ "ಟರ್ಮಿನಲ್‌ನಲ್ಲಿ ತೆರೆ" ಅನ್ನು ಆಯ್ಕೆ ಮಾಡಿ. ಆಗ ತೆರೆದುಕೊಳ್ಳುವ ಟರ್ಮಿನಲ್ ವಿಂಡೊದಲ್ಲಿ, ಭಾಷೆಯ ಪ್ಯಾಕ್ ಅನ್ನು ಅನುಸ್ಥಾಪಿಸಲು ಆಜ್ಞೆಯನ್ನು ಕಾರ್ಯಗತಗೊಳಿಸಿ (ಈ ಕೆಳಗಿನ ಎಲ್ಲಾ ಆಜ್ಞೆಗಳಲ್ಲಿಯೂ ಸಹ ನಿಮ್ಮ ನಿರ್ವಾಹಕ ಬಳಕೆದಾರ ಗುಪ್ತಪದವನ್ನು ನಮೂದಿಸುವಂತೆ ಕೇಳಲಾಗಬಹುದು):

ಡಿಬಿಯನ್/ಉಬುಂಟು-ಆಧರಿತವಾದ ವ್ಯವಸ್ಥೆಗಳಲ್ಲಿ: sudo dpkg -i *.deb

ಫೆಡೋರ-ಆಧರಿತವಾದ ವ್ಯವಸ್ಥೆಗಳಿಗಾಗಿ: su -c 'yum install *.rpm'

ಮ್ಯಾಂಡ್ರೀವಾ-ಆಧರಿತವಾದ ವ್ಯವಸ್ಥೆಗಳಿಗಾಗಿ: sudo urpmi *.rpm

ಇತರೆ RPM-ಬಳಸುವ ವ್ಯವಸ್ಥೆಗಳಿಗಾಗಿ (ಓಪನ್‌ಸುಸೆ, ಇತರೆ): rpm -Uvh *.rpm

ಈಗ LibreOffice ಅನ್ವಯಗಳಲ್ಲಿ ಒಂದನ್ನು ಆರಂಭಿಸಿ - ಉದಾಹರಣೆಗೆ, ರೈಟರ್. ಉಪಕರಣಗಳು ಮೆನುಗೆ ತೆರಳಿ ಮತ್ತು ಆಯ್ಕೆಗಳನ್ನು ಆರಿಸಿ. ಆಯ್ಕೆಗಳ ಸಂವಾದ ಚೌಕದಲ್ಲಿ, "ಭಾಷೆಯ ಸಿದ್ಧತೆಗಳು" ಎನ್ನುವುದರ ಮೇಲೆ ಕ್ಲಿಕ್ ಮಾಡಿ ನಂತರ "ಭಾಷೆಗಳು" ಎನ್ನುವದರ ಮೇಲೆ ಕ್ಲಿಕ್ಕಿಸಿ.  Dropdown the "ಬಳಕೆದಾರ ಸಂಪರ್ಕಸಾಧನ" ಎಂಬ ಬೀಳುಪಟ್ಟಿಯಲ್ಲಿ ಹಾಗು ನೀವು ಈಗತಾನೆ ಅನುಸ್ಥಾಪಿಸಿದ ಭಾಷೆಯನ್ನು ಆರಿಸಿ. ಬೇಕಿದ್ದಲ್ಲಿ, "ಲೊಕ್ಯಾಲ್ ಸಿದ್ಧತೆಗಳು", "ಪೂರ್ವನಿಯೋಜಿತ ಚಲಾವಣೆ ನಾಣ್ಯ", ಹಾಗು "ದಸ್ತಾವೇಜುಗಳಿಗಾಗಿನ ಪೂರ್ವನಿಯೋಜಿತ ಭಾಷೆಗಳು" ಎಂಬುವಕ್ಕೆ ಇದೇ ರೀತಿ ಮಾಡಿ.

ಈ ಸಿದ್ಧತೆಗಳನ್ನು ಹೊಂದಿಸಿದ ಮೇಲೆ, ಸರಿ ಎಂಬುದರ ಮೇಲೆ ಕ್ಲಿಕ್ ಮಾಡಿ. ಸಂವಾದ ಚೌಕವು ಮುಚ್ಚಿಕೊಳ್ಳುತ್ತದೆ, ಹಾಗು LibreOffice ಇಂದ ನೀವು ನಿರ್ಗಮಿಸಿದ ನಂತರ ಮಾತ್ರ ನೀವು ಮಾಡಿದ ಬದಲಾವಣೆಗಳು ಕಾರ್ಯ ರೂಪಕ್ಕೆ ಬರುತ್ತವೆ ಎನ್ನುವ ಸಂದೇಶವು ನಿಮಗೆ ಕಾಣಿಸಿಕೊಳ್ಳುತ್ತದೆ ಮತ್ತು ಅದನ್ನು ಮರಳಿ ಆರಂಭಿಸಿ (QuickStarter ಆರಂಭಗೊಂಡಿದ್ದಲ್ಲಿ ಅದನ್ನೂ ಸಹ ಮುಚ್ಚಲು ಮರೆಯಬೇಡಿ).

ಮುಂದಿನ ಬಾರಿ ನೀವು LibreOffice ಅನ್ನು ಆರಂಭಿಸಿದಾಗ, ನೀವು ಅನುಸ್ಥಾಪಿಸಿದ ಭಾಷೆಯನ್ನು ಅದು ಆರಂಭಗೊಳ್ಳುತ್ತದೆ.

----------------------------------------------------------------------
ಪ್ರೊಗ್ರಾಮನ್ನು ಸಿದ್ಧಗೊಳಿಸುವ ಸಂದರ್ಭದ ತೊಂದರೆಗಳು
----------------------------------------------------------------------

LibreOffice ಅನ್ನು ಆರಂಭಿಸುವಲ್ಲಿನ ಹಾಗು ತೆರೆ ಪ್ರದರ್ಶಕದಲ್ಲಿ ತೊಂದರೆಗಳಿಗೆ ಸಾಮಾನ್ಯವಾಗಿ (ಉದಾ. ಅನ್ವಯವು ಸ್ಥಬ್ದಗೊಳ್ಳುವುದು) ಗ್ರಾಫಿಕ್ ಕಾರ್ಡಿನ ಚಾಲಕವು ಕಾರಣವಾಗಿರುತ್ತದೆ. ಇಂತಹ ಸಮಸ್ಯೆಗಳು ಎದುರಾದಲ್ಲಿ, ದಯವಿಟ್ಟು ನಿಮ್ಮ ಗ್ರಾಫಿಕ್‌ ಕಾರ್ಡನ್ನು ಅಪ್‌ಡೇಟ್‌ ಮಾಡಿಕೊಳ್ಳಿ ಅಥವ ನಿಮ್ಮ ಕಾರ್ಯವ್ಯವಸ್ಥೆಯೊಂದಿಗೆ ನೀಡಲಾದ ಗ್ರಾಫಿಕ್‌ ಕಾರ್ಡನ್ನು ಬಳಸಿನೋಡಿ. 3D ವಸ್ತುಗಳನ್ನು ತೋರಿಸುವಲ್ಲಿ ಕಂಡುಬರುವ ತೊಂದರೆಯನ್ನು ಪರಿಹರಿಸಲು ಸಾಮಾನ್ಯವಾಗಿ 'ಉಪಕರಣಗಳು - ಆಯ್ಕೆಗಳು - LibreOffice - ನೋಟ - 3D (ಮೂರು ಆಯಾಮ) ನೋಟ'ದಲ್ಲಿನ "OpenGL ಅನ್ನು ಬಳಸು" ಅನ್ನು ನಿಷ್ಕ್ರಿಯಗೊಳಿಸಬೇಕು.

----------------------------------------------------------------------
ಸಮೀಪಮಾರ್ಗ ಕೀಲಿಗಳು
----------------------------------------------------------------------

ಕೇವಲ ಕಾರ್ಯವ್ಯವಸ್ಥೆಯಿಂದ ಬಳಸದೆ ಇರುವ ಸಮೀಪಮಾರ್ಗ ಕೀಲಿಗಳನ್ನು (ಕೀಲಿ ಸಿದ್ಧತೆಗಳು) ಮಾತ್ರವೆ LibreOffice ನಲ್ಲಿ ಬಳಸಬಹುದಾಗಿದೆ. ಎಲ್ಲಿಯಾದರೂ LibreOffice ನಲ್ಲಿನ ಒಂದು ಕೀಲಿ ಸಿದ್ಧತೆಯು LibreOffice ಸಹಾಯದಲ್ಲಿ ವಿವರಿಸಿದಂತೆ ಕೆಲಸ ಮಾಡದೆ ಹೋದಲ್ಲಿ, ಆ ಸಮೀಪಮಾರ್ಗವನ್ನು ನಿಮ್ಮ ಕಾರ್ಯ ವ್ಯವಸ್ಥೆಯಲ್ಲಿ ಬಳಸಲಾಗಿದೆಯೆ ಎಂದು ಪರಿಶೀಲಿಸಿ. ಈ ಸಂದಿಗ್ದತೆಯನ್ನು ಪರಿಹರಿಸಲು ನಿಮ್ಮ ಕಾರ್ಯ ವ್ಯವಸ್ಥೆಗೆ ನಿಯೋಜಿಸಲಾದ ಕೀಲಿಗಳನ್ನು ಬದಲಾಯಿಸಬಹುದಾಗಿದೆ. ಇಲ್ಲವೆ ಇದಕ್ಕೆ ಬದಲಾಗಿ, LibreOffice ಗೆ ನಿಯೋಜಿಸಲಾದ ಯಾವ ಕೀಲಯನ್ನಾದರೂ ಸಹ ಬದಲಾಯಿಸಬಹುದಾಗಿದೆ. ಇದರೆ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, LibreOffice ಸಹಾಯವನ್ನು ಅಥವ ನಿಮ್ಮ ಕಾರ್ಯವ್ಯವಸ್ಥೆಯ ಸಹಾಯ ದಸ್ತಾವೇಜನ್ನು ನೋಡಿ.

----------------------------------------------------------------------
ಕಡತದ ಲಾಕಿಂಗ್
----------------------------------------------------------------------

LibreOffice ರಲ್ಲಿ ಪೂರ್ವನಿಯೋಜಿತವಾಗಿ ಕಡತವನ್ನು ಲಾಕ್ ಮಾಡುವುದನ್ನು ಶಕ್ತಗೊಳಿಸಿಲಾಗಿರುತ್ತದೆ. Network File System ಪ್ರೊಟೊಕಾಲ್ (NFS) ಅನ್ನು ಬಳಸುವ ಒಂದು ಜಾಲಬಂಧದಲ್ಲಿ, NFS ಕ್ಲೈಂಟ್‌ಗಳಿಗಾಗಿನ ಲಾಕ್ ಮಾಡುವ ಡೀಮನ್ ಸಕ್ರಿಯವಾಗಿರಬೇಕು. ಕಡತವನ್ನು ಲಾಕ್ ಮಾಡುವುದನ್ನು ಅಶಕ್ತಗೊಳಿಸಲು, soffice ಸ್ಕ್ರಿಪ್ಟನ್ನು ಸಂಪಾದಿಸಬೇಕು ಹಾಗು "export SAL_ENABLE_FILE_LOCKING" ಎಂಬ ಸಾಲನ್ನು "# export SAL_ENABLE_FILE_LOCKING" ಎಂಬುದಕ್ಕೆ ಬದಲಾಯಿಸಬೇಕು. ಕಡತ ಲಾಕ್ ಮಾಡುವುದನ್ನು ಅಶಕ್ತಗೊಳಿಸಿದಲ್ಲಿ, ಒಂದು ದಸ್ತಾವೇಜನ್ನು ಮೊದಲು ತೆರೆಯುವವರಿಗೆ ಮಾತ್ರವೆ ಆಗುವಂತೆ ಬರೆಯುವ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿರುವುದಿಲ್ಲ.

----------------------------------------------------------------------
ಚಿತ್ರಾತ್ಮಕ ಕಾರ್ಯನಿರ್ವಹಣೆ
----------------------------------------------------------------------

ಪೂರ್ವನಿಯೋಜಿತವಾಗಿ, LibreOffice ವೇಗಕ್ಕೆ ಹೋಲಿಸಿದಲ್ಲಿ ಸುಂದರವಾಗಿ ಕಾಣಿಸುವ ಗ್ರಾಫಿಕ್ಸುಗಳಿಗೆ ಪ್ರಾತಿನಿಧ್ಯ ನೀಡುತ್ತದೆ. ನಿಮಗೆ  ಗ್ರಾಫಿಕ್ಸುಗಳು ನಿಧಾನವಾಗಿವೆ ಎನಿಸಿದಲ್ಲಿ, 'ಉಪಕರಣಗಳು - ಆಯ್ಕೆಗಳು - LibreOffice - ನೋಟ - ಆಂಟಿಅಲಿಯಾಸಿಂಗ್ ಅನ್ನು ಬಳಸು' ಅನ್ನು ಆಫ್‌ ಮಾಡಬಹುದು.

----------------------------------------------------------------------
ಪ್ರಮುಖ ನಿಲುಕಣಾ ಸೂಚನೆಗಳು
----------------------------------------------------------------------

LibreOffice ನಲ್ಲಿನ ನಿಲುಕಣಾ ಸವಲತ್ತುಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, http://www.libreoffice.org/accessibility/ ಅನ್ನು ನೋಡಿ.

----------------------------------------------------------------------
ಬಳಕೆದಾರ ಬೆಂಬಲ
----------------------------------------------------------------------

http://www.libreoffice.org/faq/. ಎಂಬಲ್ಲಿರುವ FAQ ವಿಭಾಗವನ್ನೂ ಸಹ ನೋಡಿ.

ಇಲ್ಲಿರುವ FAQ ವಿಭಾಗವನ್ನೂ ಸಹ ನೋಡಿ :  http://www.libreoffice.org/faq/.

----------------------------------------------------------------------
ದೋಷಗಳನ್ನು ಹಾಗು ಸಮಸ್ಯೆಗಳನ್ನು ವರದಿ ಮಾಡುವಿಕೆ
----------------------------------------------------------------------

Our system for reporting, tracking and solving bugs is currently BugZilla, kindly hosted at https://bugs.libreoffice.org/. We encourage all users to feel entitled and welcome to report bugs that may arise on your particular platform. Energetic reporting of bugs is one of the most important contributions that the user community can make to the ongoing development and improvement of LibreOffice.

----------------------------------------------------------------------
ಸೇರ್ಪಡೆಗೊಳ್ಳುವಿಕೆ 
----------------------------------------------------------------------

ಈ ಮುಕ್ತ ಆಕರ ಪರಿಯೋಜನೆಯಲ್ಲಿ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ LibreOffice ಸಮುದಾಯಕ್ಕೆ ಬಹಳ ಪ್ರಯೋಜನವಾಗುತ್ತದೆ.

ಒಬ್ಬ ಬಳಕೆದಾರರಾಗಿ, ನೀವು ಈಗಾಗಲೆ ಇದರ ವಿಕಸನೆಯ ಪ್ರಕ್ರಿಯೆಯ ಒಂದು ಅಮೂಲ್ಯವಾದ ಭಾಗವಾಗಿದ್ದೀರಿ ಹಾಗು ನೀವು ಇನ್ನೂ ಸಹ ಸಕ್ರಿಯವಾದ  ಪಾತ್ರವನ್ನು ವಹಿಸುವಂತೆ ನಾವು ಪ್ರೋತ್ಸಾಹಿಸಲು ಇಚ್ಛಿಸುತ್ತೇವೆ. ನೆರವಾಗುವ ಕುರಿತಾದ ಪುಟವಾದ http://www.libreoffice.org/contribution/ ಅನ್ನು ನೋಡಿ ಹಾಗು ದಯವಿಟ್ಟು ನಮ್ಮೊಂದಿಗೆ ಸೇರಿಕೊಳ್ಳಿ.

ಹೇಗೆ ಪ್ರಾರಂಭಿಸಬೇಕು
----------------------------------------------------------------------

ಕೈಜೋಡಿಸಲು ಆರಂಭಿಸಲು ಉತ್ತಮವಾದ ಮಾರ್ಗವೆಂದರೆ ಒಂದು ಅಥವ ಹೆಚ್ಚಿನ ಮೈಲಿಂಗ್ ಲಿಸ್ಟಿಗೆ ಚಂದಾದಾರರಾಗುವುದು, ಒಂದಿಷ್ಟು ಸಮಯ ಕಾದು, ನಂತರ ಅಲ್ಲಿನ ವಿಷಯಗಳನ್ನು ಓದುವುದು, ನಂತರ ನಿಧಾನವಾಗಿ LibreOffice ನ ಆಕರ ಸಂಕೇತವು ಅಕ್ಟೋಬರ್ 2000 ದಂದು ಬಿಡುಗಡೆಯಾದಲ್ಲಿಂದ ಇಲ್ಲಿಯವರೆಗೆ ಚರ್ಚೆ ಮಾಡಲಾದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಮೈಲ್ ಆರ್ಕೈವ್‌ಗಳನ್ನು ಬಳಸಿ. ನಿಮಗೆ ಅನುಕೂಲವಾದಾಗ, ನಿಮ್ಮ ಬಗ್ಗೆ ಪರಿಚಯಿಸುವ ಒಂದು ಇಮೈಲ್ ಅನ್ನು ಕಳುಹಿಸಿ. ನಿಮಗೆ ಮುಕ್ತ ಆಕರ ಪರಿಯೋಜನೆಗಳ ಬಗೆಗೆ ಪರಿಚಯವಿದ್ದಲ್ಲಿ, http://www.libreoffice.org/develop/ ಎಂಬಲ್ಲಿರುವ ನಮ್ಮ To-Dos ಪಟ್ಟಿಗಳನ್ನು ನೋಡಿ ಹಾಗು ಹಾಗು ನೀವು ಮಾಡುವಂತಹ ಕೆಲಸಗಳು ಯಾವುವಾದರೂ ಇವೆಯೆ ಎಂದು ಪರೀಕ್ಷಿಸಿ.

ಚಂದಾದಾರರಾಗಿ
----------------------------------------------------------------------

http://www.libreoffice.org/contribution/ ನಲ್ಲಿ ನೀವು ಚಂದಾದಾರರಾಗಬಹುದಾದಂತಹ ಕೆಲವು ಮೈಲಿಂಗ್ ಲಿಸ್ಟುಗಳನ್ನು ಇಲ್ಲಿ ನೀಡಲಾಗಿದೆ

* ಸುದ್ದಿ: announce@documentfoundation.org *ಎಲ್ಲಾ ಬಳಕೆದಾರರಿಗೂ ಸಲಹೆ ಮಾಡಲಾಗುತ್ತದೆ* (ವಿರಳ ದಟ್ಟಣೆ)
* ಮುಖ್ಯ ಬಳಕೆದಾರ ಲಿಸ್ಟ್‍ : users@global.libreoffice.org *ಚರ್ಚೆಗಳನ್ನು ಗಮನಿಸಲು ಸುಲಭವಾದ ಮಾರ್ಗ* (ಹೆಚ್ಚು ದಟ್ಟಣೆ)
* ಮಾರುಕಟ್ಟೆ ಪರಿಯೋಜನೆ: marketing@global.libreoffice.org *ವಿಕಸನೆಯ ಹೊರತಾಗಿದೆ* (ದಟ್ಟಣೆ ಹೆಚ್ಚುತ್ತಿದೆ)
* ಸಾಮಾನ್ಯ ವಿಕಸನೆಗಾರರ ಲಿಸ್ಟ್‍: libreoffice@lists.freedesktop.org (ಹೆಚ್ಚು ದಟ್ಟಣೆ)

ಒಂದು ಅಥವ ಹೆಚ್ಚಿನ ಪರಿಯೋಜನೆಗಳಲ್ಲಿ ಸೇರ್ಪಡೆಯಾಗುವುದು
----------------------------------------------------------------------

ನಿಮಗೆ ಅಷ್ಟೇನೂ ತಂತ್ರಾಂಶ ವಿನ್ಯಾಸ ಅಥವ ಸಂಜ್ಞೆಗಳ (ಕೋಡಿಂಗ್) ಅನುಭವ ಇಲ್ಲದೆ ಹೋದರೂ ಸಹ ನೀವು ಈ ಪ್ರಮುಖ ಮುಕ್ತ ಆಕರ ಪರಿಯೋಜನೆಗೆ ಮುಖ್ಯವಾದ ದೇಣಿಗೆಯನ್ನು ನೀಡಬಹುದು. ಹೌದು, ನೀವೆ!

ನೀವು LibreOffice 4.2 ಅನ್ನು ಬಳಸಲು ಹರ್ಷಿಸುತ್ತೀರಿ ಹಾಗು ಆನ್‌ಲೈನಿನಲ್ಲಿ ನಮ್ಮೊಂದಿಗೆ ಸೇರಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ.

LibreOffice ಸಮುದಾಯ

----------------------------------------------------------------------
Used / Modified Source Code
----------------------------------------------------------------------

Portions Copyright 1998, 1999 James Clark. Portions Copyright 1996, 1998 Netscape Communications Corporation.